ತುಲಾ ರಾಶಿ -
ಆಕಾಶದಲ್ಲಿರುವ 88 ನಕ್ಷತ್ರಪುಂಜಗಳ ಪೈಕಿ ಒಂದು (ಲೈಬ್ರ). ಪ್ರಮುಖವಾದ ಹನ್ನೆರಡು ರಾಶಿಗಳಲ್ಲಿ (ಮೇಷ,ವೃಷಭ, ಇತ್ಯಾದಿ) ಏಳನೆಯದು. ವಿಷುವದಂಶ 14 ಗಂ. 20 ಮಿ. ನಿಂದ 16 ಗಂ. ; ಘಂಟಾವೃತ್ತಾಂಶ 00 ಯಿಂದ 300 ದ. ಈ ರಾಶಿಯನ್ನು ಅನುಕ್ರಮವಾಗಿ ಸರ್ಪೆನ್ಸ್ ಕಾಪುಟ್, ಕನ್ಯಾ, ಹೈಡ್ರಾ, ಲ್ಯೂಪಸ್, ವೃಶ್ಚಿಕ ನಕ್ಷತ್ರಪುಂಜಗಳು ಸುತ್ತುವರಿದಿದೆ. ತನ್ನ ವಾರ್ಷಿಕ ತೋರ್ಕೆ ಭೂಪರಿಭ್ರವ್ಮಣೆಯಲ್ಲಿ ಅದರ ಗಡಿಬಿಂದುವಾದ ಕನ್ಯಾರಾಶಿಯನ್ನು ಸೂರ್ಯ ಹಾದು ಈ ರಾಶಿಯನ್ನು ಪ್ರವೇಶಿಸಿ (ತುಲಾ ಸಂಕ್ರಾಂತಿ) ವೃಶ್ಚಿಕ ಮತ್ತು ಧನುರಾಶಿಗಳ ಹಿನ್ನೆಲೆಯಲ್ಲಿ ಸಂಚರಿಸಿ ಮತ್ತೆ ಮೇಷ ರಾಶಿಯನ್ನು ಪ್ರವೇಶಿಸುತ್ತದೆ. ಈ ರಾಶಿಯಲ್ಲಿನ ಪ್ರಮುಖ ನಕ್ಷತ್ರಗಳು ((, (, (, () ಬಾಹು ಮತ್ತು ತಟ್ಟೆಗಳಿರುವ ತಕ್ಕಡಿಯ ಆಕೃತಿಯನ್ನು ಮೂಡಿಸುವುದರಿಂದ ತುಲಾ ಎಂಬುದು ಅನ್ವರ್ಥವಾಗಿದೆ. ನ್ಯಾಯ ದೇವತೆಯೆಂದು ಪರಿಗಣಿಸಲಾಗಿರುವ ಕನ್ಯೆಯೊಬ್ಬಳು ಈ ತಕ್ಕಡಿಯನ್ನು ಮೊದಲಿಗೆ ಹಿಡಿದಿದ್ದಳು ಎಂಬುದಾಗಿ ತಿಳಿಯಲಾಗಿತ್ತು. 2,000 ವರ್ಷಗಳ ಹಿಂದೆ ಆ ಕಾಲದ ತುಲಾ ಸಂಕ್ರಾಂತಿಯ ವೇಳೆಗೆ ಸೂರ್ಯ ಈ ರಾಶಿಯಲ್ಲಿ ಇದ್ದು ಹಗಲು ಮತ್ತು ಇರುಳುಗಳು ಒಂದೇ ಅವಧಿಯದವಾಗಿದ್ದವು. ಎಂಬುದೂ ಇದನ್ನು ತಕ್ಕಡಿಗೆ ಹೋಲಿಸುವುದಕ್ಕೆ ಇರುವ ಕಾರಣಗಳಲ್ಲೊಂದು. ತುಲಾರಾಶಿಯಲ್ಲಿನ ಪ್ರಥಮ ನಕ್ಷತ್ರಕ್ಕೆ ವಿಶಾಖ (ಜೂಬೆಲ್ ಜೆನ್ಯೂಬೀ) ಎಂದು ಹೆಸರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ